Sunday, September 28, 2008

ಸ್ಪೋಟ

ನಾಯಿ ಬಾಲಕ್ಕೆ ಪಟಾಕಿ ಕಟ್ಟಿ
ಅದು ಸಿಡಿಯುವುದನ್ನೇ
ಕಾಯುವ ಪೋಲಿ ಹುಡುಗ
ತುಟಿ ಕಚ್ಚಿ ಕಿವಿ ನಿಮಿರಿಸಿ
ನಾಯಿ ಕುಂಞ ಎಂದರಚುತ್ತಾ
ಓಡುವುದನ್ನೇ ನೆನೆಸುವಾಗ
ಅದೆಂಥಾ ಮೋಜು..

ಪಟಾಕಿ ಯಾವಾಗ ಸಿಡಿದು ಬಿಡುತ್ತದೋ
ಹುಡುಗನಿಗೆ ಕ್ಷಣ ಅನಂತ
ಪಕ್ಕದ ಐಸ್‌ಕ್ಯಾಂಡಿ ಹಾರ್ನ್ ಸಹ
ಕಿವಿಗೆ ದೂರ

ಎದೆ ನಡುಗಿಸುವ ಸದ್ದಿಗೆ
ಕಿವಿ ತಯಾರು
ತುಂಟ ಕಣ್ಣಲ್ಲಿ ಇನ್ನಿಲ್ಲದ ಕಾತರ

ಆ ಕ್ಷಣ ಕಣ್ಣು ಎವೆ ಮುಚ್ಚಲಿಲ್ಲ
ಎದೆ ಬಡಿತ ಏರಿತ್ತು
ದೇಹವ್ಯಾಪಿ ಉದ್ವಿಗ್ನತೆ
ಅವನು ಅವನನ್ನೇ ಮೀರುವುದರಲ್ಲಿದ್ದ

ನಾಯಿ ನಾಲಗೆ ಚಾಚಿ
ಹುಡುಗನನ್ನು ಸಮೀಪಿಸಿತು.
ಅವನ ಕಾಲು ನೆಕ್ಕಿ ಬಾಲ ಅಲ್ಲಾಡಿಸಿತು
ಅಲ್ಲಿ ಸ್ಪೋಟವೊಂದು ಕಾದುಕುಳಿತಿತ್ತು.

7 comments:

Sushrutha Dodderi said...

ತುಂಬಾ ಚನಾಗ್ ಬರೀತೀರಾ ನೀವು..

ARUN MANIPAL said...

ನಮಸ್ಕಾರ,

"ನಮ್ಮಪ್ಪ ತೋಟ ಮಾರ್ತಾರಂತೆ"ಅನ್ನುವ ಬರಹ ಒಳಗೊಂಡಿರುವ ವಾಸ್ತವ ತುಂಬಾ ಮಾರ್ಮಿಕವಾದದ್ದು .ಬಹಳ ಸಮಯಗಳಿಂದ ಅಂಥದ್ದೊಂದು ವಿಷಯದ ಮೇಲೆ ನಾಟಕ ಬರೆಯಲು ಒದ್ದಾಡುತ್ತಿದ್ದ ನನಗೆ ನೀವು ತುಂಬಾ ಬಲವಾದ ವಸ್ತು ಕೊಟ್ಟದ್ದೀರಿ,ನಿಮ್ಮ ಅಭ್ಯಂತರವಿಲ್ಲವಾದರೆ ನೀವು ಬರಹದಲ್ಲಿ ತೋರಿಸಿದ ವ್ಯಕ್ತಿ ಚಿತ್ರಗಳನ್ನು ಪಾತ್ರವಾಗಿಸುವ ಅನುಮತಿ ಕೇಳುತ್ತಿದ್ದೇನೆ.ಯಾವುದಕ್ಕು ನನಗೊಂದು ಈ ಮೈಲ್ ಮಾಡಿ ತಿಳಿಸಿ..
arunkmanipal@gmail.com

sunaath said...

ತುಂಬಾ ಸುಂದರವಾದ ಕವನ!

ಮನೋರಮಾ.ಬಿ.ಎನ್ said...

chenddada alochane...
antu nanage helale illa nee ee blog start madiddu..! kopa..

shivu.k said...

ಪಕ್ಕ ಗಾಂಧಿವಾದಿ ನಾಯಿ ಕಣ್ರೀ..!
ಶಿವು.ಕೆ
ನನ್ನ ಬ್ಲಾಗಿಗೊಮ್ಮೆ ಅಲ್ಲಿ ನಿಮಗಿಷ್ಟವಾದ ಫೋಟೊ ಮತ್ತು ಲೇಖನ ಸಿಗಬಹುದು.
ಮತ್ತೊಂದು ಆಶ್ಚರ್ಯಕ್ಕೆ:
http://camerahindhe.blogspot.com/

ಸುದು said...

ನಿಮ್ಮ ಎಲ್ಲ ಬರಹಗಳನ್ನ ಓದಿದೆ, ತುಂಬಾ ಇಷ್ಟ ಆಯಿತು. ಬರೆಯುವುದನ್ನ ದಯವಿಟ್ಟು ನಿಲ್ಲಿಸಬೇಡಿ

paapu paapa said...

Hi Priya,

I am from shirlal, My mind is eager to see you. Your writings are good, by name kervashe I am so interested to read, then finished all your writings. My english is english medium english. So I think you can adjust with that. If you have time, please mail to preetiz08@yahoo.com.